ಗುರುವಾರ, ಡಿಸೆಂಬರ್ 9, 2010

accident ಆಗೋಗಿದೆ...!

ಹೇಗಿರುತ್ತೆ accident ನ ಅನುಭವ?? 
ನನಗೆ ಗೊತ್ತಿರುವ ಎಲ್ಲಾ 'ಬಿದ್ದ' ಸ್ನೇಹಿತರಿಗೂ ಕೇಳಿದ್ದ, ಕೇಳುತ್ತಿರುವ ಹಾಗು ಕೇಳುವ ಪ್ರಶ್ನೆ ಅದು, ಏಕೆಂದರೆ ನನಗೆ ಅ ದಿವ್ಯನುಭಾವವಿರಲಿಲ್ಲ! ಆದರೆ ಅವರು ಕೊಟ್ಟಿದ್ದ, ಕೊಡುತ್ತಿರುವ ಹಾಗು ಕೊಡುವ ಉತ್ತರ ಥೇಟ್ ವಿಷ್ಣುವರ್ಧನ್ ಶೈಲಿಯಲ್ಲಿ-'experience cannot be explained , ಅನುಭವನ ಅನುಭವಿಸಬೇಕು' , ಒಂದು ಸಲ ಬಿದ್ರೆನೆ ಅದರ ಮಜಾ ಏನೂ ಅಂತ ತಿಳಿಯುತ್ತೆ ಅನ್ನುವ ಧಾಟಿ ಅವರದಾಗಿತ್ತು. 
ಬೀಳುವುದರಲ್ಲೂ ಅದೆಷ್ಟು ವಿಧಗಳು! 
ರಾತ್ರಿ ಹೊತ್ತು petrol bunk ಗೆ ಕಟ್ಟುವ ಹಗ್ಗಕ್ಕೆ ಗಾಡಿ ನುಗ್ಗಿಸಿ ಮುಗ್ಗರಿಸುವುದರಿಂದಾ ಹಿಡಿದು, ಹಿಡಿಯಲು ಬಂದ traffic police ಗೇ ಗುದ್ದಿ ಅವರ ಮೇಲೇ ಬೀಳುವ ಸಾಹಸಿ ಗೆಳೆಯರಿದ್ದಾರೆ ! 
12 ತಿಂಗಳಲ್ಲಿ 15 ಸಲ ತನ್ನ ಗಾಡಿಯನ್ನು ತನ್ನ ಜೊತೆಯೇ ಮಣ್ಣು ಮುಕ್ಕಿಸಿದ ಸಾಹಸಿ ಗೆಳೆಯ ಹೇಮಂತ್ ನಮ್ಮ ಗುಂಪಿನಲ್ಲೇ ಬೀಳುವುದರಲ್ಲಿ ರೆಕಾರ್ಡ್ ಮಾಡಿರುವವನು! 
ಹೀಗೆ ಬಿದ್ದವರು ಕೊಡುತ್ತಿದ್ದ ಕಾರಣಗಳೂ ಅಷ್ಟೇ ರಂಜನೀಯವಾಗಿರುತಿತ್ತು!  ನಾಯಿ ಅಡ್ಡ ಬಂತು, ಬೇರೆಯವರು ಬಂದು ಗುದ್ದಿದರು, ಕತ್ತಲಾಗಿತ್ತು....ಹೀಗೆ ಸಾಗುತ್ತದೆ ಕಾರಣಗಳು. 
ಆಗ ಬೇಡಿಕೊಂಡೆ ದೇವರನ್ನ ನಾನು- 'ದಯವಿಟ್ಟು ನಾನು ಬೀಳುವುದಕ್ಕೆ ಹೊಸ ಕಾರಣವೊಂದನ್ನ ಕರುಣಿಸು, ಅಥವಾ ಕಾರಣವೇ ಇಲ್ಲದೆ ಬೀಳಿಸು! No reasons what so ever!'.
ನನ್ನ ಬೇಡಿಕೆ ಥೇಟ್ ಹಿರಣ್ಯ ಕಶುಪುವಿನ ಬೇಡಿಕೆಯ  ಹಾಗೆಯೇ ಇತ್ತು- ನಾನು ಬೀಳುವಾಗ ಕತ್ತಲಾಗಿರಬಾರದು, ಬೆಳಗ್ಗೆಯೂ ಆಗಿರಬಾರದು; ನನಗೆ ಯಾರೂ, ಯಾವುದೂ ಗುದ್ದಬಾರದು; ನಾನು ಯಾರಿಗೂ, ಯಾವುದಕ್ಕೂ ಗುದ್ದಬಾರದು. ಒಟ್ಟಿನಲ್ಲಿ ಬೀಳಬೇಕು, ಕೇವಲ ನನ್ನ ಅಹಂಕಾರವನ್ನು ಕಮ್ಮಿ ಮಾಡಿಕೊಳ್ಳುವುದಕ್ಕೆ!
ಈ ವಿಲಕ್ಷಣ ಭಕ್ತನ ವಿಲಕ್ಷಣ ಬೇಡಿಕೆಯನ್ನ ಈಡೇರಿಸುವುದಕ್ಕೆ, ಅಂತ ಸಂಧರ್ಭವನ್ನ ಸೃಷ್ಟಿಸುವುದಕ್ಕೆ ದೇವರು ಕೆಲವು ಸಮಯ ತೆಗೆದುಕೊಂಡ. Love at the time of cholera ದ ನಾಯಕನು ನಾಯಕಿಗಿಗಾಗಿ ಕಾಯುವ ಹಾಗೆಯೇ ನನ್ನನ್ನೂ ದೇವರು ಬೀಳಿಸುವುದಕ್ಕೆ ಕಾಯಿಸಿದ! 
ಆದರೆ ಇಂದು ದೇವರು ಕಣ್ಣು ಬಿಟ್ಟ- ನಾನು ಬಿದ್ದೆ!, ನಾನು ಬಿದ್ದಾಗ-
ಬೆಳಗ್ಗೆಯಲ್ಲ, ರಾತ್ರಿಯೂ ಅಲ್ಲ-ಸಂಜೆಯಾಗಿತ್ತು!
ನಾನು ಯಾರಿಗೂ, ಯಾವುದಕ್ಕೂ ಗುದ್ದಲಿಲ್ಲ; ನನಗೂ ಯಾರೂ ಯಾವುದೂ ಗುದ್ದಲಿಲ್ಲ-ಆದರೂ ಬಿದ್ದೆ!
ಹಿಂದಿನ ಸೀಟಿನಲ್ಲಿ ಹುಡುಗಿಯೂ ಕೂತಿರಲಿಲ್ಲ, ಹಾಗಂತ ಒಂಟಿಯಾಗಿಯೂ ಇರಲಿಲ್ಲ!
ಸುಮ್ಮನೆ ಹೋಗುತ್ತಿದ್ದವನು ಬ್ರೇಕ್ ಹಾಗಿದೆ- ಕಣ್ಣು ಬಿಟ್ಟಾಗ ರಸ್ತೆಯ ಮೇಲೆ, ನನ್ನ ಗಾಡಿಯ ಜೊತೆಗೆ, ಗೆಳೆಯನ ಜೊತೆಗೆ.
ಹೇಗಿತ್ತು ಆ ಅನುಭವ?
ನಾನು ಕಣ್ಣು ಬಿಟ್ಟಾಗ-ಪ್ರಪಂಚವೆಲ್ಲಾ ತಲೆಕೆಳಗಾಗಿದೆ, ನಾನೊಬ್ಬನೇ ಸರಿಯಾಗಿದ್ದೇನೆ...ಇಲ್ಲ..ತಲೆಕೆಳಗಾದ ಕಾರು, ಬಸ್ಸು, ಓಡಾಡುವ, ನೋಡಿ ಹೋಗುವ, ನೋಡದೆಯೂ ಹೋಗುವ, ಎತ್ತುವುದ ಬಿಟ್ಟು ಬಗ್ಗಿ ನೋಡಿ ತಮ್ಮ ವಿಚಾರಧಾರೆಯನ್ನು ಹೊರಗೆಡವುವ ಬಗೆ ಬಗೆಯ ತಲೆಕೆಳಗಾದ ಮನುಷ್ಯರು...ನಾನು ಬಿದ್ದರೂ ಪ್ರಪಂಚವೇ ತಲೆಕೆಳಗಾದಿದೆ ಬಿದ್ದಿದೆ ಎಂದು ವಿಶ್ಲೇಸಿಸುವ ಒಂದು ಸದಾವಕಾಶ ನನಗೆ ಬಂದಿತ್ತು....zoo ನಲ್ಲಿ imported ಕೋತಿಯನ್ನು ಹೇಗೆ ಜನರು ಸುತ್ತುವರಿದು ನೋಡುತ್ತಾರೋ, ಹಾಗೆ ನನ್ನನ್ನೂ ನೋಡುತಿದ್ದರಿಂದ ನನಗೆ ಮುಜುಗರವಾಗಿ ಎದ್ದು ನಿಂತುಕೊಂಡೆ, ಬರೀ ತರಚಿದ ಗಾಯಗಳಾಗಿದ್ದವು. 
ಈಗ- 'ಮುಟ್ಟಿದರೆ ಮುನಿ' ತರಹ ನನಗೆ ಮೈಯಲ್ಲಿ ಎಲ್ಲಿ 'ಮುಟ್ಟಿದರೂ ಉರಿ'!

3 ಕಾಮೆಂಟ್‌ಗಳು:

  1. ಕಿರಣ್ ನಿನ್ನ ಅನುಭವ ಕೇಳಿ ನಾನು ಸಹ ನನ್ನ ಅನುಭವ ಹೇಳುತ್ತೇನೆ. ೩ ದಿನಗಳ ಹಿಂದೆ ನನಗು ಸಹ ಒಂದು ಆಕ್ಸಿಡೆಂಟ್ ಆಯಿತು. ಅದಕ್ಕೆ ಕಾರಣ ನನ್ನ ಮುಂದೆ ಚಲಿಸುತ್ತಿದ್ದ ಗಾಡಿಯವನು indicator ಹಾಕದೆ ಬಲಕ್ಕೆ ಅವನ ಗಾಡಿಯನ್ನು ತಿರುಗಿಸಿದ್ದು... ನನ್ನ ಜೊತೆ ನನ್ನ ತಂದೆ ಸಹ ಬಿದ್ದರು, ಅದೃಷ್ಟವಶಾತ್ ಯಾರಿಗೂ ಏನೂ ತೊಂದರೆ ಆಗಲಿಲ್ಲ... ಹಾಂ ಆದರೆ ಕೇವಲ ೩ ತಿಂಗಳ ಹಿಂದೆ ಕೊಂಡಿದ್ದ ನನ್ನ ಹೊಸ ಗಾಡಿಗೆ ಸ್ವಲ್ಪ ಪೆಟ್ಟಾಗಿದೆ...

    ಪ್ರತ್ಯುತ್ತರಅಳಿಸಿ
  2. bharisu kannada dindimava hey karunada hrudya shiva...........................keep going i love to read kannada

    ಪ್ರತ್ಯುತ್ತರಅಳಿಸಿ