ಹೊಸ ವರ್ಷದ ಹೊಸ್ತಿಲಲ್ಲಿ:
ಮೊನ್ನೆ ಕ್ರಿಸ್ಮಸ್, ಇಂದು ವೈಕುಂಟ ಏಕಾದಶಿ , ಮೊಹರಂ ಕೂಡ....ಎರಡು ದಿನ ಕಳೆದರೆ ಹೊಸ ವರುಷ......
ಈ ಮಧ್ಯೆ ಭಾರತವು ಲಂಕಾ ವಿರುದ್ಧ ಕ್ರಿಕೆಟ್ ಸರಣಿಯನ್ನು ಗೆದ್ದಿದೆ....ಸಂಭ್ರಮಿಸಲು ಅದೆಷ್ಟು ಕಾರಣಗಳು.....
ಸರ್ವರಿಗೂ ಹೊಸ ವರ್ಷದ ಹಾರ್ಧಿಕ,ಹೃದ್ಪೂರ್ವಕ,ಸದ್ಭಾವನೆಯ,ಶುಭಾಶಯಗಳು.....
ಸರ್ವೇ ಜನ ಸುಖಿನೋ ಭವಂತೂ....
ಹೊಸ ವರುಷವು ತಮಗೆಲ್ಲರಿಗೂ ಹೊಸ ಕನಸುಗಳಿಗೆ, ಹೊಸ ಸಾಧ್ಯತೆಗಳಿಗೆ, ಹೊಸ ಹಾದಿಯೆಡೆಗೆ,ಹೊಸ ದೃಷ್ಟಿಕೋನದೆಡೆಗೆ, ಹೊಸ ದಿಗಂತದೆಡೆಗೆ,ಹೊಸ ಗುರಿಯೆಡೆಗೆ,ಹೊಸ ಗುರುವಿನೆಡೆಗೆ(!),ಹೊಸಬರೆಡೆಗೆ,ಹೊಸ ಜಗತ್ತಿನೆಡೆಗೆ ಕರೆದೊಯ್ಯಲಿ ಎಂದು ಹಾರೈಸುತ್ತೇನೆ....
ಈ ವರ್ಷದಲ್ಲಿ ಬರದಿರಲಿ ಪಕ್ಕದ ದೇಶದಿಂದ ಗನ್ನು ಹಿಡಿದ ಹುಡುಗರು,ಆಗದಿರಲಿ ಮತ್ತೆ ಜಲಪ್ರಳಯ,ಬರದಿರಲಿ ಮತ್ತೆ ತ್ಸುನಾಮಿ,ನಮ್ಮ ರಾಜಕಾರಣಿಗಳಿಗೆ ಕಾಡದಿರಲಿ ಮತ್ತೆ "ಬಂಡಾಯದ" ಭೂತ,ಏಳದಿರಲಿ ಮತ್ತೆ ನಮ್ಮ ನಾಡ ಒಡೆಯುವ ಕೂಗು......
ಹೊಸ ವರುಷವು ನಿಮ್ಮೆಲರ ಹಳೆಯ ಕನಸುಗಳ ಈಡೇರುವಿಕೆಗೆ ನೆಪವಾಗಲಿ......
ಮತ್ತು ತನ್ಮೂಲಕ ನಿಮಗೆ ಹೊಸ ಸದಭಿರುಚಿಯ,ಸುಸಂಸ್ಕ್ರುತದ,ಸರಳವಾಗಿರುವ, ಸುಂದರವಾಗಿರುವ,ಸಂಭ್ರಮಿಸಬಹುದಾದ, ಸಾತ್ವಿಕವಾಗಿರುವ,ಸುಮಧುರವಾಗಿರುವ,ಸ್ಪಷ್ಟವಾಗಿರುವ,ಸಿಹಿ ಕನಸುಗಳನ್ನು ಕಾಣಲು ಪ್ರೇರಣೆ ನೀಡಲಿ ಎಂದು ಹಾರೈಸುತ್ತಾ.......
ಇಂತಿ ನಿಮ್ಮ ಪ್ರೀತಿಯ....
ನಾನು!
chennagide, tamagu kooda shubhashayagalu...
ಪ್ರತ್ಯುತ್ತರಅಳಿಸಿdhnayavaadagalu
ಪ್ರತ್ಯುತ್ತರಅಳಿಸಿ