ಹೀಗಂತ ಸಾವಿರ ಸರಿ ಅಂದುಕೊಂಡಿದ್ದೀವಿ, ಮತ್ತು ಅಷ್ಟು ಸಾರಿಯೂ ಯಶಸ್ವಿಯಾಗಿ ಆ ಮಾತನ್ನು ಮುರಿದಿದ್ದೀವಿ....
cricket ಒಂದು ಸಂಭ್ರಮ....ನಮ್ಮ ದ್ಯನಂದಿನ ಚಟುವಟಿಕೆಗಳಲ್ಲಿ ಒಂದಾಗಿಬಿಟ್ಟಿತ್ತು....
ಯಾಕೆಂದರೆ ಅದನ್ನು ಯಾರು ಬೇಕಾದರೂ, ಯಾರ ಜೊತೆ ಬೇಕಾದರೂ, ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ, ಹೇಗೆ ಬೇಕಾದರೂ ಆಡಬಹುದಿತ್ತು....ಅಥವಾ ನಾವು ಹಾಗಂದುಕೊಂಡಿದ್ದೆವು...(ಈಗಲೂ..!)
ಪುಸ್ತಕಗಳಲ್ಲಿ ಆಡುತಿದ್ದ book ಕ್ರಿಕೆಟ್, ಕ್ಲಾಸಲ್ಲಿ ಬೆಂಚುಗಳನ್ನು ಸರಿಸಿ ಜಾಗ ಮಾಡಿಕೊಂಡು ಆಡುತಿದ್ದ short wicket, ನಮ್ಮ ಮನೆಯ ರೂಮಿನಲ್ಲಿ, ಮನೆ ಮುಂದಿನ ಕಾರಿಡಾರ್ ನಲ್ಲಿ, ಮನೆ ಮೇಲಿನ terrace ನಲ್ಲಿ, ಮನೆ ಕೆಳಗಿನ ಶೆಡ್ ನಲ್ಲಿ, ಮನೆ ಮುಂದಿನ ರಸ್ತೆಯಲ್ಲಿ, ಪಕ್ಕದ ರಸ್ತೆಯಲ್ಲಿ, ದೊಡ್ಡ ಮೋರಿಯನ್ನು ಮುಚ್ಚಿದ್ದ bridge ಮೇಲೆ, ಚೆನ್ನಮ್ಮನಕೆರೆ, APS, ಕೃಷ್ಣ ರಾವ್ ಪಾರ್ಕ್.....ಹೀಗೆ ಇಡೀ ಜಗತ್ತನ್ನೇ ನಮ್ಮ ಕ್ರಿಕೆಟ್ ಮೈದಾನ ಮಾಡಿಕೊಂಡಿದ್ದೆವು....
ಹೇಳುವವರಿರಲಿಲ್ಲ, ಕೇಳುವವರಿರಲಿಲ್ಲ, ಅಥವಾ ಅವರು ಹೇಳುತಿದ್ದರೂ ನಾವುಗಳು ಕೇಳುತ್ತಿರಲಿಲ್ಲ....!!
ಹೀಗಿದ್ದ ನಮ್ಮನ್ನು ಮನೆಯಲ್ಲಿ ಕೂಡಿ ಹಾಕುತ್ತಿದ್ದ ಒಂದೇ ಒಂದು ಸಂಗತಿಯೆಂದರೆ....ಮತ್ತದೇ ಕ್ರಿಕೆಟ್ಟು...!! ಭಾರತದ ಯಾವುದಾದರೊಂದು ಮ್ಯಾಚ್ ಇದ್ದರೆ ಸಾಕು ನಮ್ಮ team ನ ಎಲ್ಲರು ಯಾರಾದರೊಬ್ಬರ ಮನೆಯಲ್ಲಿ tent ಹಾಕುತಿದ್ದೆವು...ಯಾವುದೇ ವಿಮರ್ಶಕನಿಗೂ ಕಮ್ಮಿ ಇಲ್ಲದಂತೆ ಪ್ರತಿಯೊಂದು ಎಸತವನ್ನೂ ವಿಮರ್ಶೆ ಮಾಡುತ್ತಿದ್ದೆವು..., ದೀಪಾವಳಿಗೆ ತಂದಿದ್ದ ಪಟಾಕಿಯನ್ನು ಭಾರತ ಗೆಲ್ಲುವ
ಮ್ಯಾಚ್ ಗಳಿಗಾಗಿ ಎತ್ತಿಡುತ್ತಿದ್ದೆವು...ಆ ಮಟ್ಟಗಿನ ಆಶಾಭಾವನೆಯನ್ನಾದರೂ ನಮ್ಮ ಮೇಲೆ ಕ್ರಿಕೆಟ್ ಬೀರಿತ್ತು...ಆದರೆ ನಮ್ಮ ಕ್ರಿಕೆಟ್ ಹುಚ್ಚು ಇಷ್ಟಕ್ಕೇ ಸೀಮಿತವಾಗಿದ್ದರೆ ಚೆನ್ನಾಗಿರ್ತಿತ್ತು....ಯಾಕೆಂದರೆ ನಾವು ಎಷ್ಟೋ ಬಾರಿ ಅದನ್ನು ಅತಿರೇಕಕ್ಕೆ ಎತ್ತಿಕೊಂಡು ಹೋಗುತಿದ್ದೆವು....
ಒಂದು ಸಲ ಮನೆ ಎದುರಿದ್ದ thyagarajnagar police station ಬೋರ್ಡ್ ಗೆ ಹೊಡೆದಿದ್ದೆವು....ಆದರೆ ಅಷ್ಟರಲ್ಲಾಗಲೇ ಅಲ್ಲಿರುವವರು ನಮಗೆ ಪರಿಚಿತರಾಗಿದ್ದರಿಂದ ನಮಗೆ ಏನು ಮಾಡಲಿಲ್ಲ...
ಮಗು ಮಲಗಿದೆ ಗಲಾಟೆ ಮಾಡಬೇಡಿ ಅಂತ ಎದುರು ಮನೆಯವರು, tution ತಗೊಳಕ್ಕೆ ಡಿಸ್ಟರ್ಬ್ ಆಗುತ್ತೆ ಅಂತ ಇನ್ನೊಬ್ಬರು, ವಯಸ್ಸಗಿರುವವರಿದ್ದಾರೆ ನೀವು ಈ ರೀತಿ ಅನಾಗರಿಕರಂತೆ ಆಡುತ್ತ ಕಿರುಚುತ್ತಿದ್ದರೆ ಅವರು heart attack ಆಗಿ ಹೋಗೇ ಬಿಡುತ್ತಾರೆ ಅಂತ ಮಿಕ್ಕವರು....ಹೀಗೆ ನಮ್ಮ ಸ್ವಾತಂತ್ರ್ಯವನ್ನು ಕಸಿದು ಕೊಳ್ಳುವುದಕ್ಕೆ ಹಲವು "ಹೊಟ್ಟೆ ಕಿಚ್ಚಿನವರು" ವಿಫಲ ಪ್ರಯತ್ನ ಆಗಾಗ ಮಾಡುತಿದ್ದರು....(ಇದರಲ್ಲಿ ನಮ್ಮ ಮನೆಯವರೂ ಇದ್ದರು!)
ಒಂದು ಬಾರಿ ನಮ್ಮ ಸನ್ಮಾನ್ಯ ಆಟಗಾರನೊಬ್ಬ( ಹೆಸರು ಹೇಳುವಂತಿಲ್ಲ!) ಆಗ ತಾನೇ ಪ್ರಚಲಿತಕ್ಕೆ ಬಂದಿದ್ದ reverse sweep ಅನ್ನು ಪ್ರಯೋಗಿಸಿದನು...ಬಾಲು ಸೀದಾ ಎದರು ಮನೆಯ ತೆರೆದ ಕಿಟಕಿಯೊಳಗೆ ಹೋಯಿತು...
ಆ ಮನೆಯವರು ನಮ್ಮನ್ನು ನೋಡುವ ಮುನ್ನ, ಅಥವಾ ಪಕ್ಕದ ಮನೆಯವರು ನೋಡುವ ಮುನ್ನ, ದಾರಿ ಹೋಕರು ನೋಡುವ ಮುನ್ನ, ನಮ್ಮ ಮನೆಯವರು ನೋಡುವ ಮುನ್ನ....ನಾವುಗಳು ಮನೆಗೆ ಓಡಿಬಿಟ್ಟೆವು...(ನಂತರ ನಮಗೆ ತಿಳಿಯಿತು ಬಾಲು ಅವರು ಮಾಡುತ್ತಿದ್ದ ಸಾರಿನಲ್ಲಿ ಬಿದ್ದಿತ್ತು...)
ನಾವಂದಿದ್ದು ಅದೇ ಮಾತು-"ನಾಳೆಯಿಂದ cricket ಆಡೋದು ಬೇಡ!"
ಈಗ ಮೊನ್ನೆ national college ground ನಲ್ಲಿ ಆಡುತ್ತಿದ್ದಾಗ, ಆಡುವ ಹುಮ್ಮಸ್ಸಿನಲ್ಲಿ ನಮ್ಮಣ್ಣ ಇನ್ನೊಬ್ಬನಿಗೆ ಡಿಕ್ಕಿ ಹೊಡೆದನು...ಮೂಗಿನಲ್ಲಿ ರಕ್ತ ಬಂತು...ನಂತರ X-ray ತೆಗೆದಾಗ ಕಂಡಿದ್ದು - ಮೂಗು ಮುರಿದಿತ್ತು...
ಆಗ ನಾವಂದು ಕೊಂಡಿದ್ದು-
"ನಾಳೆಯಿಂದ cricket ಆಡೋದು ಬೇಡ!" (ನಾಡಿದ್ದು ಭಾನುವಾರ ಆಡುತಿದ್ದೀವಿ, ನಮ್ಮಣ್ಣನನ್ನೂ ಸೇರಿಸಿಕೊಂಡು...!)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ